Pratilipi Kannada - ಪ್ರತಿಲಿಪಿ ಕನ್ನಡ Facebook ad: “ಒಲವ ಶರಧಿ”

Ran for 75 days, from January 14 to March 30, 2026, the last day Crush saw it.
Run by Pratilipi Kannada - ಪ್ರತಿಲಿಪಿ ಕನ್ನಡ on Facebook. Crush is not the advertiser and does not verify its claims. See this ad in Meta's Ad Library(opens in a new tab)
Want an ad like this for your product?
Crush makes new ad images for your product from this ad: your logo, your product photo, your offer.
Trials from $19.95 USD, then $79.95 USD a month. Cancel anytime.
About this ad
- Meta Ad Library ID
- 1571132220595706
- Platforms
- Facebook, Instagram, Messenger and Threads
- Relaunches
- 0
Ad text
#Freeread #Kannada #Goodreads ಪ್ರಯಾಣಿಕರೇ ದಯವಿಟ್ಟು ಗಮನಿಸಿ.. ಗಾಡಿ ಸಂಖ್ಯೆ 17325 ವಿಶ್ವ ಮಾನವ ಎಕ್ಸ್ಪ್ರೆಸ್ ಎರಡನೇ ಪ್ಲಾಟ್ ಫಾರ್ಮ್ ಗೆ ಸ್ವಲ್ಪ ಸಮಯದಲ್ಲಿ ಬಂದು ಸೇರಲಿದೆ.. ಎಂದು ಜಂಗಮದುರ್ಗದ ರೈಲ್ವೆ ಸ್ಟೇಶನ್ನಲ್ಲಿ ಅನೌನ್ಸ್ ಮಾಡುವ ಹೊತ್ತಿಗೆ ತನ್ನ ಸೋದರತ್ತೆ ಮಗಳು ಶರಧಿಯನ್ನ ಕರೆದುಕೊಂಡು ಹೋಗಲು ಬಂದ ಸಂಜಯ್ ಬೈಕ್ನಿಂದ ಇಳಿದು ಟೈಂ ನೋಡಿಕೊಂಡ.. ಸಮಯ ಬೆಳಗಿನ ಜಾವ ಆರು ಗಂಟೆಯಾಗಿತ್ತು.. ಕಾರ್ತಿಕ ಮಾಸದ ಮುಂಜಾವಿನ ಚಳಿ ತಡೆಯಲಾಗದೇ ಜರ್ಕಿನ್ ಹಾಕಿಕೊಂಡು ಬಂದವ ಮಂಜಿನಂತಾಗಿದ್ದ ತನ್ನೆರಡು ಕೈಗಳನ್ನ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಟ್ರೇನ್ ಬರುವ ದಾರಿಯನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದ.. ಅನೌನ್ಸ್ ಮಾಡಿದಂತೆಯೇ ಐದು ನಿಮಿಷದಲ್ಲಿ ದೊಡ್ಡ ಸದ್ದು ಮಾಡುತ್ತಾ ಟ್ರೈನ್ ಬಂದಿತ್ತು.. ನಂತರದ ಎರಡು ನಿಮಿಷದಲ್ಲಿ ಸಂಜಯ್ ಮುಂದೆ ಶರಧಿ ನಡುಗುತ್ತ ನಿಂತಿದ್ದಳು.. ಚಳಿಯಿಂದಲ್ಲ ಅವನ ಮೇಲಿನ ಭಯದಿಂದ.. ಅವಳನ್ನೇ ತೀಕ್ಷ್ಣವಾಗಿ ನೋಡುತ್ತಿದ್ದ ಸಂಜಯ್.. "ಮಾಮ ಅದೂ ನನ್ ಫೋನ್ ಕಳೆದುಹೋಗಿಬಿಡ್ತು.. ಅದಕ್ಕೆ ಸ್ವಿಚ್ ಆಫ್ ಬರ್ತಿದೆ.. ನಾನು ಸರಿಯಾದ ಜಾಗಕ್ಕೆ ಕೂತಿದ್ದೆ ಆದರೆ ಯಾರೋ ಒಬ್ಬ ಬಂದು ಇದು ನನ್ನ ಜಾಗ ಅಂತ ಜಗಳ ಮಾಡೋಕೆ ಶುರುಮಾಡಿದ.. ಅದ್ಕೆ ಟಿಕೆಟ್ ಬುಕ್ ಆಗಿದ್ದು ತೋರಿಸಿ ಇದು ನನ್ ಜಾಗ.. ಬೇಕಿದ್ರೆ ಇದ್ರಲ್ಲಿ ಸೀಟ್ ನಂಬರ್ ಇದೇ ನೋಡು ಅಂತ ಹೇಳಿ ಅವನಿಗೆ ಫೋನ್ ಕೊಟ್ಟೆ ಆದರೆ ಅವನು ನನ್ನ ಫೋನ್ ತಗೊಂಡು ಹೋಗಿಬಿಟ್ಟ.." ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಳು.. ಅವನ ನೋಟದ ತೀವ್ರತೆ ಒಂಚೂರು ಕಮ್ಮಿಯಾಗಿರಲಿಲ್ಲ.. ನಂತರ ಅವಳ ತಲೆಗೆ ಹೊಳೆಯಿತು. ತನ್ನ ಕೈಯಲ್ಲಿದ್ದ ಎರಡು ಬ್ಯಾಗ್ ಗಳನ್ನ ಕೆಳಗೆ ಇಟ್ಟು ಅವನಿಗೆ ಮನಸಲ್ಲೇ ಸಹಸ್ರಾರು ನಾಮಾರ್ಚನೆ ಮಾಡಿಕೊಳ್ಳುತ್ತ ಲಘುವಾಗಿ ತಬ್ಬಿದಳು.. ಇವನ ಕೋಪದ ಮನೆ ಹಾಳಾಗ ಬುಸುಗುಡುತ್ತಾ ನಿಂತಿದ್ದಕ್ಕೆ ಹೇಗೆ ಹೃದಯ ಬಡೆದುಕೊಳ್ತಿದೆ ನೋಡು... ಎಂದು ಗುನುಗುತ್ತಿದ್ದವಳ ಕೈಯನ್ನ ಒಂದು ನಿಮಿಷದ ಬಳಿಕ ತಾನೇ ತೆಗಿಸಿ ಅವಳ ಲಗೇಜ್ ಹಿಡಿದುಕೊಂಡು ಮುಂದೆ ಹೊರಟರೆ ಇವಳು ಅವನನ್ನ ಹಿಂಬಾಲಿಸಿದಳು.. ಅವಳ ಎರಡು ಲಗೇಜ್ ಬೈಕ್ನ ಮುಂಭಾಗದಲ್ಲಿಟ್ಟು ಗಾಡಿ ಹತ್ತಿ ಕುಳಿತು ಹಾರ್ನ್ ಬಾರಿಸಿದ. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದವಳು ಹೆಚ್ಚು ಕಮ್ಮಿ ಓಡುತ್ತಲೇ ಬಂದು ಗಾಡಿ ಹತ್ತಿ ಕುಳಿತಳು.. ಜಂಗಮ ದುರ್ಗದಿಂದ ಶಿವನದುರ್ಗಕ್ಕೆ ಒಂದು ಘಂಟೆ ಪ್ರಯಾಣ.. ಶಿವನದುರ್ಗಕ್ಕೆ ನೇರ ಬಸ್ಸು ಬರೋದು ದಿನಕ್ಕೆ ಮೂರು ಬಾರಿ ಮಾತ್ರ.. ಹಾಗಾಗಿ ಆ ಊರಿನ ಹೆಚ್ಚು ಜನರು ಅವಲಂಬಿಸಿರುವುದು ತಮ್ಮ ಸ್ವಂತ ಗಾಡಿಯನ್ನೇ.. ಜಂಗಮ ದುರ್ಗದ ದಾರಿ ಸವೆಸಿ ತನ್ನೂರ ದಾರಿ ಹಿಡಿದ ಬೈಕಿನ ವೇಗ ಜಾಸ್ತಿಯಾಯಿತು. ನನ್ನನ್ನ ಮನುಷ್ಯಳು ಅನ್ಕೊಂಡಿದ್ದಾನಾ ಅಥವಾ ಅಕ್ಕಿ ಮೂಟೆ ಅಂದುಕೊಂಡಿದ್ದಾನಾ?? ನಿಧಾನಕ್ಕೆ ಹೋಗೋದಕ್ಕೆ ಅದೇನ್ ಧಾಡಿಯೋ... ಈ ಎಮ್ಮೆ ಚರ್ಮಕ್ಕೆ ಅಲ್ಲಲ್ಲ ಕೋಣದ ಚರ್ಮಕ್ಕೆ ಅಂತೂ ಏನೂ ಆಗೋದೇ ಇಲ್ಲ ಆದರೆ ನನ್ನ ಈ ಸುಕೋಮಲ ದೇಹ ಹರ್ಟ್ ಆಗುತ್ತೆ ಅನ್ನೋ ಸೆನ್ಸ್ ಬೇಡವಾ??? ಎಂದು ಕೈ ಸನ್ನೆ ಮಾಡುತ್ತ, ಧ್ವನಿ ಆಚೆ ಬರದೇ ಮಾತನಾಡಿಕೊಳ್ಳುತ್ತಿದ್ದವಳ ದೃಷ್ಟಿ ಬೈಕಿನ ಕನ್ನಡಿಯತ್ತ ಹರಿದಾಗ ಅವನ ಕಣ್ಣುಗಳು ತನ್ನನ್ನೇ ನೋಡುತ್ತಿದ್ದದ್ದು ಕಂಡು ಬೆಕ್ಕಿನ ಮರಿಯ ಹಾಗೆ ಬಾಲ ಮುದುರಿಕೊಂಡು ಕುಳಿತಳು.. ಬೈಕಿನ ವೇಗ ಇನ್ನೂ ಜಾಸ್ತಿಯಾಯಿತು.. ಇಬ್ಬರ ನಡುವೆ ಇದ್ದ ಅಂತರ ದೂರವಾಗಿ ಅವನಿಗೆ ಅಂಟಿಕೊಂಡು ಕುಳಿತಿದ್ದಲ್ಲದೇ ಒಂದು ಕೈಯಿಂದ ಅವನ ಹೆಗಲನ್ನ, ಇನ್ನೊಂದು ಕೈಯಿಂದ ಅವನನ್ನ ಗಟ್ಟಿಯಾಗಿ ಹಿಡಿದುಕೊಂಡಳು. ಐದು ನಿಮಿಷ ಕಳೆದಿತ್ತಷ್ಟೇ ಅವಳ ಮುಖ ಅವನ ಬೆನ್ನಿಗೆ ಒರಗಿದ ನಂತರವಷ್ಟೇ ಗಾಡಿಯ ವೇಗ ತಗ್ಗಿದ್ದು..... ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...
Where the ad sends people
kn.pratilipi.com
ಒಲವ ಶರಧಿ ♥️
Learn more: kn.pratilipi.com(opens in a new tab)









