Skip to content
Pratilipi Kannada - ಪ್ರತಿಲಿಪಿ ಕನ್ನಡ

Pratilipi Kannada - ಪ್ರತಿಲಿಪಿ ಕನ್ನಡ Facebook ad: “ನೆಲೆಗಾಣದ ಹಕ್ಕಿ - ಅಧ್ಯಾಯ 1 « Y K Sandhya Sharma | ಪ್ರತಿಲಿಪಿ”

Pratilipi Kannada - ಪ್ರತಿಲಿಪಿ ಕನ್ನಡ Facebook ad: ನೆಲೆಗಾಣದ ಹಕ್ಕಿ - ಅಧ್ಯಾಯ 1 « Y K Sandhya Sharma | ಪ್ರತಿಲಿಪಿ

Ran for 10 days, from March 20 to March 30, 2026, the last day Crush saw it.

Run by Pratilipi Kannada - ಪ್ರತಿಲಿಪಿ ಕನ್ನಡ on Facebook. Crush is not the advertiser and does not verify its claims. See this ad in Meta's Ad Library(opens in a new tab)

Want an ad like this for your product?

Crush makes new ad images for your product from this ad: your logo, your product photo, your offer.

Trials from $19.95 USD, then $79.95 USD a month. Cancel anytime.

About this ad

Meta Ad Library ID
797857256669844
Platforms
Facebook, Instagram, Messenger and Threads
Relaunches
0

How we count

Ad text

#Freeread #Kannada #Goodreads ಹೊರಗೆ ಜೋರಾಗಿ ಕಾರಿನ ಹಾರನ್ ಶಬ್ದ ಕೇಳಿಸಿತು. ಮಹಡಿ ಮೇಲಿನ ತನ್ನ ಕೋಣೆಯ ಕಿಟಕಿಯಿಂದ, ತೆರೆ ಸರಿಸಿ ಬಗ್ಗಿ ನೋಡಿದಳು ಸೌದಾಮಿನಿ. ಓಡಿಬಂದು ವಾಚ್ ಮ್ಯಾನ್ ಗೆಟನ್ನು ತೆರೆದ. ಕೆನೆ ಬಣ್ಣದ ಕಾಂಟೆಸ್ಸಾ ಕಾರು, ತೆರೆದ ಗೇಟಿನೊಳಗಿಂದ ಒಳ ಸಾಗಿ ಬಂದು ಮನೆಯ ಮುಂಭಾಗದ ರ್ಪೋರ್ಟಿಕೋದ ಒಳಗೆ ಬಂದು ನಿಂತಿತು. ತಟ್ಟನೆ ಅವಳ ಮುಖದ ಕಾಂತಿ ಆರಿ ಮಂಕಾಯಿತು. ನಿರುತ್ಸಾಹ ನಿಟ್ಟುಸಿರಾಗಿ ಚಿಮ್ಮಿ ಬಂದು ಅವಳು ಕಿಟಕಿಯಿಂದ ತಟ್ಟನೆ ಹಿಂಸರಿದು, ಸಪ್ಪಗೆ ಅಡಿಯಿರಿಸುತ್ತ ಬಂದು ಸೋಫದ ಮೇಲೆ ಮುದುರಿಕೊಂಡು ಕುಳಿತಳು. ಅವಳ ಮುಖದ ಮೇಲೆ ನಲಿವಿರಲಿಲ್ಲ. ಅರ್ಧ ಓದಿದ್ದ ಕಾದಂಬರಿಯನ್ನು ಮತ್ತೆ ಕೈಗೆತ್ತಿಕೊಂಡು ದೃಷ್ಟಿಯನ್ನು ಆದರಲ್ಲಿ ಕೀಲಿಸಲು ಪ್ರಯತ್ನಿಸಿದಳು. ಮನಸ್ಸು ಅದರಲ್ಲಿ ಹುದುಗಿಕೊಳ್ಳಲಿಲ್ಲ. “ಸೌದಾ...ಸೌದಾ...” ಕೆಳಗೆ ನಡುಮನೆಯಿಂದಲೇ ಜೋರಾಗಿ ಕೂಗುತ್ತಿದ್ದ ಕೃಷ್ಣಪ್ರಸಾದನ ಗಡಸುಕಂಠ ಇಡೀ ಮನೆಯೆಲ್ಲ ಪ್ರತಿಧ್ವನಿಸಿತು. ಸೌದಾಮಿನಿ ಕಿವುಡಿಯಂತೆ, ಕಿಂಚಿತ್ತೂ ಅಲುಗಾಡದೆ ಹಾಗೇ ಕುಳಿತಿದ್ದಳು. ಅವಳ ಗಮನವೆಲ್ಲ ತೆರೆದ ಪುಸ್ತಕದೊಳಗೆ. “ಓ...ನೀನಿಲ್ಲಿದ್ದೀಯಾ?... ಸರಿ ಸರಿ, ಹಗಲೂ ರಾತ್ರಿ ನೀನು ಹೀಗೆ ಈ ಕಥೆ ಪುಸ್ತಕಗಳನ್ನ ಕೈಲಿ ಹಿಡಿದ್ಕೊಂಡು ಕೂತುಬಿಟ್ರೆ, ನಿಂಗೆ ಊಟಾ-ತಿಂಡಿ, ನಿದ್ದೆ ಒಂದು ಕಡೆಯೂ ಗಮನ ಇಲ್ಲ.....ಕಡೆಗೆ ಈ ಗಂಡಾನೂ ಬೇಡ” ಮಹಡಿ ಹತ್ತಿ ಬಂದ ಅವನ ಮುಖ ಸಿಡುಕಿನಿಂದ ಗಂಟಾಗಿತ್ತು. ಅವನ ಕಂಚಿನ ಕಂಠದಲ್ಲಿ ಮೊಳಗಿದ ‘ಗಂಡ' ಎಂಬ ಶಬ್ದ, ಅವಳ ಗುಂಡಿಗೆಗೆ ಜಾಗಟೆಯಂತೆ ಜೋರಾಗಿ ತಾಡಿಸಿತು. ‘ಢಣ್....ಢಣ್...!' ಸೌದಾಮಿನಿ, ತಟ್ಟನೆ ಬಾಗಿದ ತನ್ನ ತಲೆಯನ್ನು ಬಿರುಸಾಗಿ ಮೇಲೆತ್ತಿ ಅವನತ್ತ ತೀಕ್ಷ್ಣವಾದ ಉರಿನೋಟವನ್ನು ಎರಚಿದಳು! ಕಿವಿಯೊಳಗೆ 'ಗಂಡ' ಎಂಬ ಆ ಪದ ಕರ್ಕಶವಾಗಿ ಮಾರ್ದನಿಸಿ, ಅಂತರಂಗದ ಒಳಗೆಲ್ಲ ಚೆಲ್ಲಾಡಿ, ಅವಳ ಹೃದಯದೊಳಗೆ ನೋವಿನ ತೆರೆ ತೆರೆ ಎದ್ದು, ಅವಳ ಕಣ್ತುಂಬಿ ಬಂತು. ಅವಳ ಕಣ್ಣೋಟ ಎದುರಿಗೆ ನಿಂತಿದ್ದ ಅವನನ್ನು ಇರಿಯುತ್ತಿತ್ತು. “ಸೌದಾ...ಯಾಕಿನ್ನೂ ಹೀಗೇ ಕೂತಿದ್ದೀಯಾ ?!... ಸಂಜೆ ಪಾರ್ಟಿ ಇದೆ, ರೆಡಿಯಾಗಿರು ಅಂತ ನಾನಾವಾಗಲೇ ನಿನಗೆ ಫೋನ್ ಮಾಡಿ ಹೇಳಿದ್ದು ಮರ್ತುಹೋಯ್ತೇನು? ಸರಿ, ಸರಿ...ಟೈಮಾಯ್ತು, ಬೇಗೆದ್ದು ರೆಡಿಯಾಗು ಹೋಗು, ಐದು ನಿಮಿಷದೊಳಗೆ,...ನಾ ಕೆಳಗಿರ್ತೀನಿ, ಬಾ ” -ಎಂದು ಕೃಷ್ಣಪ್ರಸಾದ್ ಅವಳ ಉತ್ತರಕ್ಕೂ ಕಾಯದೆ ‘ಟಕ ಟಕ' ಬೂಟು ಸದ್ದಿನೊಂದಿಗೆ ಕೆಳಗಿಳಿದು ಹೋದ. ಒಂದೆರಡು ನಿಮಿಷ ಸೌದಾಮಿನಿ ಶಿಲೆಯಂತೆ ಅಚಲಳಾಗಿ ಕುಳಿತಿದ್ದಳು. ಅವಳ ಮನಸ್ಸು ಮರಗಟ್ಟಿದಂತಾಗಿತ್ತು. ಮೇಲೆದ್ದು ಚೆನ್ನಾಗಿ ಅಲಂಕರಿಸಿಕೊಂಡು ಅವನೊಡನೆ ಪಾರ್ಟಿಗೆ ಹೋಗುವ ಉತ್ಸಾಹವಾಗಲಿ, ಸಡಗರವಾಗಲಿ ಹೆಡೆಯಾಡಿಸಲಿಲ್ಲ. ಅದೆಷ್ಟೋ ಹೊತ್ತು ಅವಳ ತನು ತುಸುವೂ ಮಿಸುಕಾಡದೆ ಮಂಜುಗಡ್ಡೆಯಂತೆ ಜಡವಾಗಿತ್ತು. ಮನದಲ್ಲಿ ರಿಂಗಣಗುಣಿತ... ಇದ್ದಕ್ಕಿದ್ದ ಹಾಗೆ ಏನೋ ನೆನೆಸಿಕೊಂಡು ತತ್‍ಕ್ಷಣ ಮೈ ಕೊಡವಿಕೊಂಡು ಮೇಲೆದ್ದು ನಿಂತಳವಳು. ಇನ್ನೊಂದರೆಗಳಿಗೆ ತಡವಾದರೂ, ಕೆಂಡಾಮಂಡಲವಾಗಿ ಕೃಷ್ಣಪ್ರಸಾದ್ ಮತ್ತೆ ಮಹಡಿಯೇರಿ ಬಂದು ಕಟುನುಡಿಗಳನ್ನು ಆಡುತ್ತಾನೆಂಬುದನ್ನರಿತ ಸೌದಾಮಿನಿ, ಅರ್ಧ ಓದಿದ್ದ ಕಾದಂಬರಿಯನ್ನು ಒಲ್ಲದ ಮನದಿಂದ ಬದಿಗಿಟ್ಟು, ಬೇಸರದಿಂದ ಗೊಣಗಿಕೊಳ್ಳುತ್ತ ಮುಖ ತೊಳೆಯಲು ಬಚ್ಚಲು ಮನೆಯತ್ತ ಸರಸರನೆ ಹೆಜ್ಚೆ ಹಾಕಿದಳು. “ಸೌದಾ...” ಅಷ್ಟರಲ್ಲಾಗಲೇ ಕೆಳಗಿನಿಂದ ಬುಲಾವ್! ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ... https://kannada.pratilipi.com/story/giglhtkigj00?location=fb-post&language=KANNADA&utm_source=facebook&utm_campaign=kannada_scheduler&redirectToReader=true&version=10112024

kannada.pratilipi.com

ನೆಲೆಗಾಣದ ಹಕ್ಕಿ - ಅಧ್ಯಾಯ 1 « Y K Sandhya Sharma | ಪ್ರತಿಲಿಪಿ

ನೆಲೆಗಾಣದ ಹಕ್ಕಿ ( ಈ ಕಥೆಯ ಕಾಲಮಾನ ಸುಮಾರು 2000 ನೆಯ ಇಸವಿ ಎಂದು ಭಾವಿಸಬಹುದು. ಮೊಬೈಲ್ ಇಲ್ಲದ ಕಾಲ) ಹೊರಗೆ ಜೋರಾಗಿ ಕಾರಿನ ಹಾರನ್ ಶಬ್ದ ಕ...

Open the advertiser's link: kannada.pratilipi.com(opens in a new tab)

More from Pratilipi Kannada - ಪ್ರತಿಲಿಪಿ ಕನ್ನಡ

See all Pratilipi Kannada - ಪ್ರತಿಲಿಪಿ ಕನ್ನಡ ads
  • Pratilipi Kannada - ಪ್ರತಿಲಿಪಿ ಕನ್ನಡ Facebook ad: ಒಲವ ಶರಧಿ

    Ran 23 days

  • Pratilipi Kannada - ಪ್ರತಿಲಿಪಿ ಕನ್ನಡ Facebook ad: ಒಲವ ಶರಧಿ

    Ran 26 days

  • Pratilipi Kannada - ಪ್ರತಿಲಿಪಿ ಕನ್ನಡ Facebook ad: ಒಲವ ಶರಧಿ

    Ran 75 days

More ads from the top 1,000

See the top 1,000 ads