

Active· since Mar 20, 2026
- 129
- days running
- 0
- relaunches
Ad copy
#Freeread #Kannada #Goodreads ರಾತ್ರಿ ಯಾವುದೋ ಚಿಂತೆ ಹೊತ್ತು ಮಲಗಿದ್ದರಿಂದ ನಿದ್ರಾದೇವಿ ಅವಳ ಹತ್ತಿರ ಸುಳಿದೇ ಇರಲಿಲ್ಲ. ಅದರ ಪರಿಣಾಮವಾಗಿ ಬೆಳಗಿನ ಜಾವ ನಿದ್ರೆ ಆವರಿಸಿ ಏಳುವುದು ತಡವಾಗಿತ್ತು. ಇದ್ದಕ್ಕಿದ್ದಂತೆ ಎಚ್ಚರವಾದವಳ ದೃಷ್ಠಿ ಗೋಡೆಯ ಮೇಲಿದ್ದ ಗಡಿಯಾರದತ್ತ ಹರಿದಿತ್ತು. ಅದು ತೋರಿಸುತ್ತಿದ್ದ ಸಮಯ ನೋಡಿದ್ದೇ, ನಿದ್ರೆಯ ಮಂಪು ಹಾರಿಹೋಗಿ ತಟ್ಟನೆ ಎದ್ದು ಕುಳಿತವಳ ಮುಂದೆ, ಕೆಂಪಾದ ಕಣ್ಣುಗಳಲ್ಲಿ ಕೆಂಡದುಂಡೆ ಉಗುಳುತ್ತಿದ್ದ ಅಚಿಂತ್ಯ ಬಂದಿದ್ದ ಅಷ್ಟೇ !! ಕ್ಷಣವೂ ತಡ ಮಾಡದೇ ತಯಾರಾಗಿ, ಬೆಳಗಿನ ಉಪಹಾರವನ್ನು ಸಹ ಮಾಡದೇ ತನ್ನ ಸ್ಕೂಟಿ ಹತ್ತಿ ಕಛೇರಿ ತಲುಪಿದ್ದಳು. ಸಾಮಾನ್ಯವಾಗಿ ತನ್ನ ಜಮದಗ್ನಿ ಬಾಸ್ನ ಕೋಪದ ಬಗ್ಗೆ ತಿಳಿದಿದ್ದರಿಂದ ಸರಿಯಾದ ಸಮಯಕ್ಕೆ ಕಚೇರಿ ತಲುಪಿ ಬಿಡುತ್ತಿದ್ದಳು. ಆತ ಯಾವಾಗಲೂ ಇವಳು ಕಚೇರಿಗೆ ಹೋದ ನಂತರವೇ ಬರುತ್ತಿದ್ದದ್ದು. ಆದ್ದರಿಂದ ಇದುವರೆಗೂ ಅವಳಿಗೆ ಅವನ ಕೋಪಕ್ಕೆ ಗುರಿಯಾಗುವ ಸನ್ನಿವೇಶ ಎಂದೂ ಎದುರಾಗಿರಲಿಲ್ಲ. ಅವನ ನಿಯಮದ ಪ್ರಕಾರ ಎಲ್ಲಾ ಕೆಲಸಗಾರರು ಅವನು ಕಚೇರಿಗೆ ತಲುಪುವ ಮೊದಲು ಅಲ್ಲಿ ಹಾಜರಾಗಿರಬೇಕಾಗಿತ್ತು. ಇಲ್ಲದಿದ್ದರೆ ಅವರ ಇಡೀ ದಿನವನ್ನು ಅವನು ನರಕ ಮಾಡಿ ಬಿಡುತ್ತಿದ್ದ. ಆದ್ದರಿಂದ ಸಾಮಾನ್ಯವಾಗಿ ಯಾರೂ ತಡವಾಗಿ ಬರುತ್ತಿರಲಿಲ್ಲ. ಆದರೆ ಇಂದು ಆರಾಧ್ಯಳ ಗ್ರಹಚಾರ ಕೆಟ್ಟಿ ತಡವಾಗಿತ್ತು. "ಹೇಗಪ್ಪಾ ಆ ಜಮದಗ್ನಿಯ ಕೋಪವನ್ನು ಸಹಿಸಿಕೊಳ್ಳುವುದು" ಎಂದುಕೊಳ್ಳುತ್ತಲೇ ತನ್ನ ಸ್ಕೂಟಿಯನ್ನು ನಿಲ್ಲಿಸಿದವಳಿಗೆ ಅಲ್ಲೇ ಇದ್ದ ಕಾರಿನ ಗಾಜಿನಲ್ಲಿ ತನ್ನ ಬಿಂಬ ನೋಡಿ ನಗು ಬಂದಿತ್ತು. ಮೆತ್ತಗೆ ಆ ಕಡೆ ಈ ಕಡೆ ನೋಡಿ 'ಯಾರೂ ಇಲ್ಲ' ಎಂಬುದನ್ನು ಖಾತ್ರಿ ಪಡಿಸಿಕೊಂಡು ಕೆದರಿದ್ದ ತನ್ನ ಕೂದಲನ್ನು ಬಿಚ್ಚಿ ಮತ್ತೆ ಸರಿಯಾಗಿ ಕೂದಲಿಗೆ ಕ್ಲಿಪ್ ಹಾಕಿದ್ದಳು. ಇದನ್ನೆಲ್ಲಾ ಕಾರಲ್ಲಿ ಕುಳಿತು ನೋಡುತ್ತಿದ್ದ ಎರಡು ಜೋಡಿ ಕಣ್ಣುಗಳ ಒಡೆಯನ ಮುಖದಲ್ಲಿ ತಿಳಿ ನಗೆ ಮೂಡಿತ್ತು. ಆದರೆ ಇದ್ಯಾವುದರ ಪರಿವು ಅವ್ಳಿಗಿರಲಿಲ್ಲ. ಅವಳನ್ನೇ ನೋಡುತ್ತಾ ಕಳೆದು ಹೋಗಿದ್ದವನು ಅವಳು ತನ್ನ ಕೈಗಡಿಯಾರ ನೋಡಿ ಓಡುತ್ತಾ ಕಚೇರಿಯ ಒಳಗೆ ಹೋಗಿದ್ದನ್ನು ನೋಡಿ ಮತ್ತೆ ನಗುತ್ತಾ ತನ್ನಲ್ಲೇ "ಏನೇ ಹುಡ್ಗಿ ಇವತ್ತು ಇಷ್ಟೊಂದು ಕಾಯಿಸಿಬಿಟ್ಟೆ !" ಎಂದುಕೊಂಡವನು ಮತ್ಯಾರು ಅಲ್ಲ ಅವಳ ಜಮದಗ್ನಿ ಬಾಸ್ ಅಚಿಂತ್ಯ. ಅವಳು ಒಳ ಹೋಗಿ ಎರಡು ನಿಮಿಷದ ನಂತರ ತಾನು ಕಾರಿನಿಂದ ಇಳಿದು ಒಳ ನಡೆದ್ದಿದನು. ಆತುರಾತುರವಾಗಿ ತನ್ನ ಸ್ಥಳಕ್ಕೆ ಹೋದ ಆರಾಧ್ಯ "ಇವತ್ತು ತನ್ನ ಕಥೆ ಮುಗಿಯಿತು!!" ಎಂದುಕೊಳ್ಳುತ್ತಿರುವಾಗಲೇ ಅಚಿಂತ್ಯ ಒಳ ಬಂದಿದ್ದನು. ಅದನ್ನು ನೋಡಿದ ಆರಾಧ್ಯಳಿಗೆ ಒಂದು ಕಡೆ ಖುಷಿ, ಮತ್ತೊಂದು ಕಡೆ ಆಶ್ಚರ್ಯವಾಗಿತ್ತು. ಅವನು ಎಂದೂ ಇಷ್ಟು ತಡವಾಗಿ ಬಂದಿರಲಿಲ್ಲ. ಆದರೂ ಇಂದು ಅವನು ತಡವಾಗಿ ಬಂದಿದ್ದಕ್ಕೆ ಅವಳಿಗೆ ಹೇಳಲಾರದಷ್ಟು ಸಂತೋಷವಾಗಿತ್ತು..... ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...
ಈ ನನ್ನ ಹೃದಯ ಸದಾ ನಿನ್ನನೇ ಬಯಸುತ್ತಿದೆ 01
ರಾತ್ರಿ ಯಾವುದೋ ಚಿಂತೆ ಹೊತ್ತು ಮಲಗಿದ್ದರಿಂದ ನಿದ್ರಾದೇವಿ ಅವಳ ಹತ್ತಿರ ಸುಳಿದೇ ಇರಲಿಲ್ಲ. ಅದರ ಪರಿಣಾಮವಾಗಿ ಬೆಳಗಿನ ಜಾವ ನಿದ್ರೆ .....
LEARN MORELike this ad? Make it yours.
Crush rebuilds this exact creative around your product — your brand, your colors, your offer — in about a minute.

