

Inactive· since Mar 20, 2026
- 11
- days it ran
- 1
- relaunches
Ad copy
#Freeread #Kannada #Goodreads ಹೊರಗೆ ಜೋರಾಗಿ ಕಾರಿನ ಹಾರನ್ ಶಬ್ದ ಕೇಳಿಸಿತು. ಮಹಡಿ ಮೇಲಿನ ತನ್ನ ಕೋಣೆಯ ಕಿಟಕಿಯಿಂದ, ತೆರೆ ಸರಿಸಿ ಬಗ್ಗಿ ನೋಡಿದಳು ಸೌದಾಮಿನಿ. ಓಡಿಬಂದು ವಾಚ್ ಮ್ಯಾನ್ ಗೆಟನ್ನು ತೆರೆದ. ಕೆನೆ ಬಣ್ಣದ ಕಾಂಟೆಸ್ಸಾ ಕಾರು, ತೆರೆದ ಗೇಟಿನೊಳಗಿಂದ ಒಳ ಸಾಗಿ ಬಂದು ಮನೆಯ ಮುಂಭಾಗದ ರ್ಪೋರ್ಟಿಕೋದ ಒಳಗೆ ಬಂದು ನಿಂತಿತು. ತಟ್ಟನೆ ಅವಳ ಮುಖದ ಕಾಂತಿ ಆರಿ ಮಂಕಾಯಿತು. ನಿರುತ್ಸಾಹ ನಿಟ್ಟುಸಿರಾಗಿ ಚಿಮ್ಮಿ ಬಂದು ಅವಳು ಕಿಟಕಿಯಿಂದ ತಟ್ಟನೆ ಹಿಂಸರಿದು, ಸಪ್ಪಗೆ ಅಡಿಯಿರಿಸುತ್ತ ಬಂದು ಸೋಫದ ಮೇಲೆ ಮುದುರಿಕೊಂಡು ಕುಳಿತಳು. ಅವಳ ಮುಖದ ಮೇಲೆ ನಲಿವಿರಲಿಲ್ಲ. ಅರ್ಧ ಓದಿದ್ದ ಕಾದಂಬರಿಯನ್ನು ಮತ್ತೆ ಕೈಗೆತ್ತಿಕೊಂಡು ದೃಷ್ಟಿಯನ್ನು ಆದರಲ್ಲಿ ಕೀಲಿಸಲು ಪ್ರಯತ್ನಿಸಿದಳು. ಮನಸ್ಸು ಅದರಲ್ಲಿ ಹುದುಗಿಕೊಳ್ಳಲಿಲ್ಲ. “ಸೌದಾ...ಸೌದಾ...” ಕೆಳಗೆ ನಡುಮನೆಯಿಂದಲೇ ಜೋರಾಗಿ ಕೂಗುತ್ತಿದ್ದ ಕೃಷ್ಣಪ್ರಸಾದನ ಗಡಸುಕಂಠ ಇಡೀ ಮನೆಯೆಲ್ಲ ಪ್ರತಿಧ್ವನಿಸಿತು. ಸೌದಾಮಿನಿ ಕಿವುಡಿಯಂತೆ, ಕಿಂಚಿತ್ತೂ ಅಲುಗಾಡದೆ ಹಾಗೇ ಕುಳಿತಿದ್ದಳು. ಅವಳ ಗಮನವೆಲ್ಲ ತೆರೆದ ಪುಸ್ತಕದೊಳಗೆ. “ಓ...ನೀನಿಲ್ಲಿದ್ದೀಯಾ?... ಸರಿ ಸರಿ, ಹಗಲೂ ರಾತ್ರಿ ನೀನು ಹೀಗೆ ಈ ಕಥೆ ಪುಸ್ತಕಗಳನ್ನ ಕೈಲಿ ಹಿಡಿದ್ಕೊಂಡು ಕೂತುಬಿಟ್ರೆ, ನಿಂಗೆ ಊಟಾ-ತಿಂಡಿ, ನಿದ್ದೆ ಒಂದು ಕಡೆಯೂ ಗಮನ ಇಲ್ಲ.....ಕಡೆಗೆ ಈ ಗಂಡಾನೂ ಬೇಡ” ಮಹಡಿ ಹತ್ತಿ ಬಂದ ಅವನ ಮುಖ ಸಿಡುಕಿನಿಂದ ಗಂಟಾಗಿತ್ತು. ಅವನ ಕಂಚಿನ ಕಂಠದಲ್ಲಿ ಮೊಳಗಿದ ‘ಗಂಡ' ಎಂಬ ಶಬ್ದ, ಅವಳ ಗುಂಡಿಗೆಗೆ ಜಾಗಟೆಯಂತೆ ಜೋರಾಗಿ ತಾಡಿಸಿತು. ‘ಢಣ್....ಢಣ್...!' ಸೌದಾಮಿನಿ, ತಟ್ಟನೆ ಬಾಗಿದ ತನ್ನ ತಲೆಯನ್ನು ಬಿರುಸಾಗಿ ಮೇಲೆತ್ತಿ ಅವನತ್ತ ತೀಕ್ಷ್ಣವಾದ ಉರಿನೋಟವನ್ನು ಎರಚಿದಳು! ಕಿವಿಯೊಳಗೆ 'ಗಂಡ' ಎಂಬ ಆ ಪದ ಕರ್ಕಶವಾಗಿ ಮಾರ್ದನಿಸಿ, ಅಂತರಂಗದ ಒಳಗೆಲ್ಲ ಚೆಲ್ಲಾಡಿ, ಅವಳ ಹೃದಯದೊಳಗೆ ನೋವಿನ ತೆರೆ ತೆರೆ ಎದ್ದು, ಅವಳ ಕಣ್ತುಂಬಿ ಬಂತು. ಅವಳ ಕಣ್ಣೋಟ ಎದುರಿಗೆ ನಿಂತಿದ್ದ ಅವನನ್ನು ಇರಿಯುತ್ತಿತ್ತು. “ಸೌದಾ...ಯಾಕಿನ್ನೂ ಹೀಗೇ ಕೂತಿದ್ದೀಯಾ ?!... ಸಂಜೆ ಪಾರ್ಟಿ ಇದೆ, ರೆಡಿಯಾಗಿರು ಅಂತ ನಾನಾವಾಗಲೇ ನಿನಗೆ ಫೋನ್ ಮಾಡಿ ಹೇಳಿದ್ದು ಮರ್ತುಹೋಯ್ತೇನು? ಸರಿ, ಸರಿ...ಟೈಮಾಯ್ತು, ಬೇಗೆದ್ದು ರೆಡಿಯಾಗು ಹೋಗು, ಐದು ನಿಮಿಷದೊಳಗೆ,...ನಾ ಕೆಳಗಿರ್ತೀನಿ, ಬಾ ” -ಎಂದು ಕೃಷ್ಣಪ್ರಸಾದ್ ಅವಳ ಉತ್ತರಕ್ಕೂ ಕಾಯದೆ ‘ಟಕ ಟಕ' ಬೂಟು ಸದ್ದಿನೊಂದಿಗೆ ಕೆಳಗಿಳಿದು ಹೋದ.... ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...
Read Best Story for Free
ನೆಲೆಗಾಣದ ಹಕ್ಕಿ ( ಈ ಕಥೆಯ ಕಾಲಮಾನ ಸುಮಾರು 2000 ನೆಯ ಇಸವಿ ಎಂದು ಭಾವಿಸಬಹುದು. ಮೊಬೈಲ್ ಇಲ್ಲದ ಕಾಲ) ಹೊರಗೆ ಜೋರಾಗಿ ಕಾರಿನ ಹಾರನ್ ಶಬ್ದ ಕ...
LEARN MORELike this ad? Make it yours.
Crush rebuilds this exact creative around your product — your brand, your colors, your offer — in about a minute.




